Subscribe Now!

Get the Latest Insights

ಸಂಚಿಕೆ –35:

ಸಂಚಿಕೆ – 35: – ಚೆನ್ನುಡಿ ಭಾಗ – 4 ರ 16ನೇ ಕಥೆ ‘ಮನುಷ್ಕೃತ್ಯದ ಬೆಲೆ’. ಈ ಕಥೆಯ ನೀತಿ – ದೇವರಿಂದ ಕೊಡುಗೆಯಾಗಿ ಬಂದಿರುವ ನಮ್ಮ ಶರೀರದ ಅಮೂಲ್ಯ ಅಂಗಗಳ ಮಹತ್ವವನ್ನು ತಿಳಿದು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು, ಪ್ರತಿಯೊಬ್ಬ ಮನುಷ್ಯನು ತನ್ನ ದೇಹದ ಅಂಗಾಂಗಗಳ ಬೆಲೆಯನ್ನು ಅರ್ಥ ಮಾಡಿಕೊಂಡಾಗ ಬದುಕು ಬಂಗಾರವಾಗುತ್ತದೆ

ಸಂಚಿಕೆ –34:

ಸಂಚಿಕೆ – 34: – ಚೆನ್ನುಡಿ ಭಾಗ -2 ರ 18ನೇ ಅಂಕಣದಲ್ಲಿ ‘ಬೆಳಕು ನೀಡುವ ಕಾರ್ಯ’. ಈ ಕಥೆಯ ನೀತಿ – ನಾವು ವಿದ್ಯಾವಂತರಾಗಿ ಬಾಳಬೇಕು, ಓದು ಬರಹ ತಿಳಿಯದ ಹಳ್ಳಿ, ಜನರನ್ನು ಮೋಸ ಪಡಿಸುವ ಪ್ರಯತ್ನದಲ್ಲಿ, ವಿದ್ಯಾವಂತರು ತೊಡಗಿರುತ್ತಾರೆ ಅಂಥವರಿಂದ ಪಾರಾಗಲು ನಾವು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಬಾಳಬೇಕು ಎಂಬುದು ಈ ಕಥೆಯ ಮಹತ್ತ್ವದ ವಿಚಾರವಾಗಿದೆ

ಸಂಚಿಕೆ – 33:

ಸಂಚಿಕೆ – 33: – ಚೆನ್ನುಡಿ ಭಾಗ – 4 ರ 24ನೇ ಕಥೆ ‘ವಿಪತ್ತನ್ನು ದೂರಗೊಳಿಸಿರಿ’. ಈ ಕಥೆಯ ನೀತಿ – ಭಗವಂತನ ಚಿಂತನೆಯಿಂದ ನಮ್ಮ ಮನಸ್ಸು ಸ್ವಚ್ಛವಾಗುತ್ತದೆ. ನಿರ್ಮಲವಾದ ಮನಸ್ಸಿನಿಂದ ಭಗವಂತನನ್ನು ಸ್ಮರಿಸಿ ಕೃತಜ್ಞತೆಯಿಂದ ಇದ್ರಾಗ ನಮಗೆ ತೊಂದರೆಗಳು ಬರುವುದಿಲ್ಲ, ಆದ್ದರಿಂದ ತೊಂದರೆ ಅಂದರೆ ವಿಪತ್ತುಗಳಿಂದ ದೂರವಿರಲು ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳುವುದೊಂದೆ ಸುಲಭ ವಿಧಾನ,

ಸಂಚಿಕೆ – 32:

ಸಂಚಿಕೆ – 32: – ಚೆನ್ನುಡಿ ಭಾಗ – 3 ರ 15ನೇ ಅಂಕಣದಲ್ಲಿ ‘ಪ್ರಾಮಾಣಿಕತೆಯೆಂಬ ಉನ್ನತ ಆದರ್ಶ ಈ ಕಥೆಯ ನೀತಿ ಈ ಕಥೆಯ ನೀತಿ – ನಾವು ಯಾವಾಗಲೂ ಪ್ರಾಮಾಣಿಕತೆಯಿಂದ ಬಾಳಬೇಕು. ಈ ಪ್ರಪಂಚದಲ್ಲಿ, ಸತ್ಯವಂತಿಕೆಗೆ, ಪ್ರಾಮಾಣಿಕತೆ, ಸದಾಚಾರಗಳಿಗೆ ಮಾದರಿಯೆನ್ನಬಹುದಾದ ಜನರು ಇದ್ದು ತಮ್ಮ ಬದುಕನ್ನು ಉತ್ತಮವಾಗಿಸಿಕೊಂಡವರ ಉದಾಹರಣೆಗಳು ಬಹಳ ಇವೆ.

ಸಂಚಿಕೆ – 31:

ಸಂಚಿಕೆ – 31: – ಚೆನ್ನುಡಿ ಭಾಗ – 4 ರ 6ನೇ ಕಥೆ ‘ಮನೆ ಮನಗಳಲ್ಲಿ ಬೆಳಕಿರಲಿ’ ಈ ಕಥೆಯ ನೀತಿ – ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು, ಚಾಣಾಕ್ಷತನದಿಂದ ಮತ್ತು ಜಾಗರೂಕತೆಯಿಂದ ಜೀವನದ ಪ್ರತಿಯೊಂದು ಸಂದರ್ಭಗಳಲ್ಲಿಯೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಬದುಕಿನಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ.

ಸಂಚಿಕೆ – 30:

ಸಂಚಿಕೆ – 30: – ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜಿ ಅವರ ಆಶೀರ್ವಚನದ ವಿಡಿಯೋ  

ಸಂಚಿಕೆ – 29:

ಸಂಚಿಕೆ – 29: – ಚೆನ್ನುಡಿ ಭಾಗ -2 ರ 28ನೇ ಕಥೆ ‘ಚಿತ್ತಶುದ್ಧಿ ಮುಖ್ಯ’ ಈ ಕಥೆಯ ನೀತಿ – ಮಕ್ಕಳನ್ನು ಉತ್ತಮ ಚಾರಿತ್ರ್ಯವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯ. ಉತ್ತಮ ನಾಗರಿಕರನ್ನಾಗಿ ಮಾಡುವುದು ಒಳ್ಳೆಯ ಸಂಸ್ಕಾರಗಳಿಂದ ಮಾತ್ರ ಸಾಧ್ಯ.

ಸಂಚಿಕೆ – 28:

ಸಂಚಿಕೆ – 28: – ಚೆನ್ನುಡಿ ಭಾಗ -2 ರ 68ನೇ ಅಂಕಣದಲ್ಲಿ ‘ಗುರಿಯನ್ನು ಮರೆಯದಿರೋಣ ಈ ಕಥೆಯ ನೀತಿ – ಹಿಂದೆ ಗುರು ಮುಂದೆ ಗುರಿ ಇದ್ದಾಗ ಯಶಸ್ಸು ಸಾಧ್ಯ. ನಮ್ಮ ಚಿತ್ರ ನಮ್ಮ ಗುರಿಯ ಕಡೆಗೆ ಇರಬೇಕೆ ಹೊರತು ಬೇರೆ ಆಕರ್ಷಣೆ ಒಳಗಾಗಬಾರದು ಎಂಬುದನ್ನು ಈ ಕಥೆಯಿಂದ ತಿಳಿಯುತ್ತೇವೆ.

ಸಂಚಿಕೆ – 27:

ಸಂಚಿಕೆ – 27: – ಚೆನ್ನುಡಿ ಭಾಗ -2 ರ 62ನೇ ಕಥೆ ‘ವಿನಯವೆಂಬ ವಿಶಿಷ್ಟ ಗುಣ ಈ ಕಥೆಯ ನೀತಿ – ವಿದ್ಯೆಗೆ ವಿನಯವೇ ಭೂಷಣ ” ಎಂಬ ಗಾದೆಯಂತೆ ವಿದ್ಯಾವಂತರು ವಿನಯವಂತರಾಗಿದ್ದರೆ ಮಾತ್ರ ಎಲ್ಲರಿಂದಲೂ ಮನ್ನಣೆಯನ್ನು ಪಡೆಯುತ್ತಾನೆ. ಆದ್ದರಿಂದ ಎಲ್ಲರೂ ವಿನಯವೆಂಬ ಸದ್ಗುಣವನ್ನು ಹೊಂದಬೇಕು,

ಸಂಚಿಕೆ – 26:

ಸಂಚಿಕೆ – 26: – ಚೆನ್ನುಡಿ ಭಾಗ -2 ರ 71ನೇ ಅಂಕಣದಲ್ಲಿ, ‘ಸೇವೆಗೆ ಪ್ರತಿಫಲ ಬೇಡ’. ಈ ಕಥೆಯ ನೀತಿ – ನಾವು ಯಾರಿಗಾದರೂ ಸಹಾಯ ಮಾಡಿದಾಗ ಅದರಿಂದ ಪ್ರತಿಫಲವನ್ನು ಬಯಸದೆ, ನಿಸ್ವಾರ್ಥ ಸೇವೆ ಮಾಡಬೇಕು, ಅದು ಭಗವಂತನಿಗೆ ಪ್ರಿಯವಾಗುತ್ತದೆ.