“ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ” ಪಾಡ್ಕಾಸ್ಟ್ ಕಾರ್ಯಕ್ರಮವನ್ನು ದಿನಾಂಕ 14.12.2022 ರಂದು ಪೂಜ್ಯ ಖಾವಂದರು ಉದ್ಘಾಟಿಸಿದರು.
ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ 50 ನೇ ವರ್ಷ ಹಾಗೂ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ 75 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಖಾವಂದರ ಚೆನ್ನುಡಿ ಕೃತಿಯ 75 ಆಯ್ದ ಕಥೆಗಳನ್ನು JSS ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿಯ ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಗಳಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್, ಸಂಸ್ಥೆಯ ಇತರ ಹಿರಿಯರು ಹಾಗೂ ಪ್ರಾಚಾರ್ಯರಾದ ಶ್ರೀಮತಿ ಉಷಾ ಸಂತೋಷ್ ಉಪಸ್ಥಿತರಿದ್ದರು. ಪೂಜ್ಯರು ಚೆನ್ನುಡಿಯ ಪಾಡ್ ಕಾಸ್ಟ್ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿ, ಮಕ್ಕಳು ತಾವು ಬರೆದ ಚೆನ್ನುಡಿಯ ಕಥೆಗಳನ್ನು ಹಾಗೂ ಅದರ ಸಾರಾಂಶವನ್ನು ಹೇಳಿದ ಶೈಲಿಯನ್ನು ಕುರಿತು ಸಂತಸ ವ್ಯಕ್ತಪಡಿಸಿ ಆಶೀರ್ವದಿಸಿದರು.