ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಯಲ್ಲಿ ನೇತ್ರಾವತಿ ಸದನದ ಆಶ್ರಯದಲ್ಲಿ ದಿನಾಂಕ ೨೬/೦೧/೨೦೨೩ ರಂದು , 74 ನೇ ಗಣರಾಜ್ಯೋತ್ಸವವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಒಂದನೇ ವರ್ಗದ ವಿದ್ಯಾರ್ಥಿ ನಂದನ್ ಮಠದ ಗಣರಾಜ್ಯೋತ್ಸವದ ಕುರಿತು ಭಾಷಣವನ್ನು ಅಚ್ಚುಕಟ್ಟಾಗಿ ಮಾಡಿದನು. ಶಾಲೆಯ ೬ ಮತ್ತು ೯ ನೇ ವರ್ಗದ ವಿದ್ಯಾರ್ಥಿಗಳು ಸಂವಿಧಾನವನ್ನು ಕುರಿತು ದೇಶಭಕ್ತಿ ಗೀತೆಯನ್ನು ಹಾಡಿದರು. ಅನೇಕ ವಿದ್ಯಾರ್ಥಿಗಳು ರಾಷ್ಟ್ರ ನಾಯಕರಾದ ಡಾ || ಬಿ ಆರ್ ಅಂಬೇಡ್ಕರ್ , ಕೆ. ಎಂ . ಮುಸ್ಸಿ , ಮಾಧವರಾವ್ ಮತ್ತು ಟಿ. ಟಿ ಕೃಷ್ಣಮಾಚಾರಿ ಅವರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ದೇಶದ ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರನ್ನು ನೆನೆಯಲಾಯಿತು.