ಸಂಚಿಕೆ –45:
ಸಂಚಿಕೆ – 45: – ಚೆನ್ನುಡಿ ಪುಸ್ತಕ ಭಾಗ-4ರ 47ನೆಯ ಅಂಕಣ “ಮಾನಸಿಕ ಸಮತೋಲನ”. ಈ ಕಥೆಯ ನೀತಿ – ನಮ್ಮ ಲೌಕಿಕ ಕಾರ್ಯಗಳನ್ನು ಬಾಹ್ಯ ಮನಸ್ಸಿನಿಂದ ಮಾಡಬೇಕು ಮತ್ತು ಅಂತರ್ಮನದಿಂದ ಭಗವಂತನ ಧ್ಯಾನವನ್ನು ಮಾಡುತ್ತಾ, ಹೋದರೆ ಜೀವನದಲ್ಲಿ, ಯಾವ ಸಮಸ್ಯೆಗಳು ಉಂಟಾಗುವುದಿಲ್ಲ ಮಾನಸಿಕ ಸಮತೋಲನದೊಂದಿಗೆ ಜೀವನದಲ್ಲಿ, ಹೆಜ್ಜೆ ಹಾಕಿದಾಗ ಜೀವನವು ಯಶಸ್ವಿಯಾಗಲು ಸಾಧ್ಯವಾಗುತ್ತದೆ.
ಸಂಚಿಕೆ –44:
ಸಂಚಿಕೆ – 44: – ಚೆನ್ನುಡಿ ಭಾಗ – 3 ರ 36ನೇ ಅಂಕಣದಲ್ಲಿ ‘ನಿಜವಾದ ಸುಖವಿಲ್ಲಿದೆ?’. ಈ ಕಥೆಯ ನೀತಿ – ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಸ್ವರ್ಗ ಸುಖ, ಸುಖ ಸಂಪತ್ತು ಆಸ್ತಿ ಇದ್ದವರು ನಿಜವಾದ ಸುಖಿಗಳಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಇರುವ ಸುಖ ಬೇರೆ ಯಾವುದರಲೂ ಸಿಗಲಾರದು.
ಸಂಚಿಕೆ –43:
ಸಂಚಿಕೆ – 43: – ಚೆನ್ನುಡಿ ಭಾಗ – 4ರ 46ನೆಯ ಕಥೆ ‘ಒಳ್ಳೆಯ ಕಾರ್ಯ ತಕ್ಷಣ ಮಾಡಿಬಿಡಿ. ಈ ಕಥೆಯ ನೀತಿ – ಜೀವನದಲಿ. ಒಳ್ಳೆಯ ಕೆಲಸಗಳನ್ನು ಮಾಡುವ ಅವಕಾಶಗಳು ಬಂದಾಗ ತಕ್ಷಣ ಮಾಡಿಬಿಡಬೇಕು. ಈ ರೀತಿ ನಾವೆಲರೂ ಒಳ್ಳೆಯ ಕರ್ತವ್ಯಗಳನ್ನು ಮಾಡಿ ಮುಗಿಸುವ ಹವ್ಯಾಸವನ್ನು ಇಟ್ಟುಕೊಂಡರೆ ಯಶಸ್ಸಿನ ಜೀವನ ನಮ್ಮದಾಗುತ್ತದೆ.
ಸಂಚಿಕೆ –42:
ಸಂಚಿಕೆ – 42: – ಚೆನ್ನುಡಿ ಭಾಗ – 3 ರ 29ನೇ ಅಂಕಣದಲ್ಲಿ ‘ಹಿರಿಯರನ್ನು ಕಡೆಗಣಿಸಬೇಡಿ’, ಈ ಕಥೆಯ ನೀತಿ – ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆದಾಗ ಜೀವನ ಸುಗಮವಾಗುತ್ತದೆ ಎಂದು ಈ ಕಥೆಯಿಂದ ತಿಳಿಯುತ್ತೆವೆ. ಕೆಲಂ ಬಲವರಿಂದ ಕಲ್ಲು ಎಂದು ಸೋಮೇಶ್ವರ ಶತಕದಲ್ಲಿ ಹೇಳಿದ ನುಡಿ ಈ ಕಥೆಗೆ ಸೂಕ್ತವೆಂದೆನಿಸುತ್ತದೆ.
ಸಂಚಿಕೆ –41:
ಸಂಚಿಕೆ – 41: – ಚೆನ್ನುಡಿ ಪುಸ್ತಕ ಭಾಗ 4ರ 35ನೆಯ ಅಂಕಣ “ಅಹಂಕಾರ ತ್ಯಜಿಸಿರಿ”. ಈ ಕಥೆಯ ನೀತಿ – ಅಹಂಕಾರವು ಮನುಷ್ಯನ ಹೃದಯದ ಕೋಮಲತೆಯನ್ನು ನಾಶ ಮಾಡಿ ಕಠೋರತೆಗೆ ಅವಕಾಶವನ್ನು ಕೊಡುತ್ತದೆ. ಆದ್ದರಿಂದ ಮನುಷ್ಯರಾದ ನಾವು ಅಹಂಕಾರವನ್ನು ತ್ಯಜಿಸಿ ಸರಳ ಮತ್ತು ಸಜ್ಜನಿಕೆಯಿಂದ ವಿವರಿಸಲು ಕಲಿತಾಗ ಜಗತ್ತು, ಸುಂದರವಾದ ನಂದನವಾಗುತ್ತದೆ.
ಸಂಚಿಕೆ –40:
ಸಂಚಿಕೆ – 40: – ಚೆನ್ನುಡಿ ಭಾಗ – 3 ರ 25ನೇ ಅಂಕಣದಲ್ಲಿ ‘ಸಾರ್ವಜನಿಕ ಸಂಪತ್ತಿನ ರಕ್ಷಣೆ ಎಲ್ಲರ ಕರ್ತವ್ಯ’. ಈ ಕಥೆಯ ನೀತಿ – ಇದು ಕಥೆಯಲ್ಲ, ಒಂದು ಸಾಮಾಜಿಕ ಕಳಕಳಿಯ ಮನವಿ, ಪ್ರತಿಯೊಬ್ಬ ಭಾರತೀಯ ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂಬುದನ್ನು ಖಾವಂದರು ಈ ಒಂದು ಅಂಕಣದಲ್ಲಿ ತಿಳಿಸಿಕೊಟ್ಟಿದ್ದಾರೆ.
ಸಂಚಿಕೆ –39:
ಸಂಚಿಕೆ – 39: – ಚೆನ್ನುಡಿ ಪುಸ್ತಕ ಭಾಗ 4ರ 102ನೆಯ ಅಂಕಣ ‘ಮೆಚ್ಚುಗೆಯ ಸವಿ ಮಾತಿನಿಂದ ಪವಾಡ”. ಈ ಕಥೆಯ ನೀತಿ – ಅನಾವಶ್ಯಕವಾಗಿ ಬೇರೆಯವರ ಬಗ್ಗೆ ಟೀಕೆಯ ಮಾತುಗಳನ್ನ ಆಡುವ ಬದಲು ಮೆಚ್ಚುಗೆಯ ಸವಿ ಮಾತುಗಳನ್ನ ಆಡಿದರೆ ಅವರ ಜೀವನವನ್ನೇ ಬದಲಾಯಿಸಬಹುದು.
ಸಂಚಿಕೆ –38:
ಸಂಚಿಕೆ – 38: – ಚೆನ್ನುಡಿ ಪುಸ್ತಕದ ಭಾಗ ಮೂರರ 18ನೇ ಅಂಕಣದಲ್ಲಿ “ಕೊಡುವುದರಲ್ಲಿರುವ ಸಂತೋಷ” . ಈ ಕಥೆಯ ನೀತಿ – ನಮ್ಮಲ್ಲಿರುವ ಸಂಪತ್ತನ್ನು ಇತರರೊಡನೆ ಹಂಚಿಕೊಳ್ಳುವುದರಲ್ಲಿ ಸಿಗುವ ಸಂತೋಷ ಮತ್ಯಾವುದರಲ್ಲೂ ಸಿಗಲಾರದು ಎಂಬುದನ್ನು ಈ ಕಥೆಯ ಮುಖಾಂತರ ತಿಳಿದುಕೊಳ್ಳುತ್ತೇವೆ.
ಸಂಚಿಕೆ –37:
ಸಂಚಿಕೆ – 37: – ಚೆನ್ನುಡಿ ಭಾಗ – 4 ರ 22ನೇ ಕಥೆ “ಸ್ವಾರ್ಥವೆಂದರೆ ಅಪಾಯಕಾರಿ” ಈ ಕಥೆಯ ನೀತಿ – ಸ್ವಾರ್ಥವು ಮನುಷ್ಯನ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಸ್ವಾರ್ಥದಿಂದ ದೂರವಾಗಿ ನಿಸ್ವಾರ್ಥಿಯಾಗಿ ಬದುಕಲು ಕಲಿತಾಗಲೇ ಮಾನವ ಹಾಗೂ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ.
ಸಂಚಿಕೆ –36:
ಸಂಚಿಕೆ – 36: – ಚೆನ್ನುಡಿ ಭಾಗ – 3 ರ 47ನೇ ಅಂಕಣದಲ್ಲಿ ನಾಲಿಗೆಯ ಹತೋಟಿ ಅಗತ್ಯ’. ಈ ಕಥೆಯ ನೀತಿ – ಮಿತ ಆಹಾರ ಸೇವನೆಯಿಂದ ಹಿತಕರ ಆರೋಗ್ಯ. ನಾವು ತಿನ್ನುವುದಕ್ಕಾಗಿ ಬದುಕದೆ ಬದುಕುವುದಕ್ಕಾಗಿ ತಿನ್ನಬೇಕು ಎಂಬುದು ಅನುಭವಿಗಳ ಮಾತು ಆ ಮಾತು ಈ ಕಥೆಗೆ ತುಂಬಾ ಸೂಕ್ತವಾಗಿರುತ್ತದೆ.