ಓಂ ಶ್ರೀ ಮಂಜುನಾಥಾಯ ನಮಃ
“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”
ಈ ವರ್ಷ ಕೊರೊನಾ ಇದ್ದ ಪ್ರಯುಕ್ತ ಮಕ್ಕಳಿಗೆ ವಿಡಿಯೋ ಮೂಲಕ ಕನ್ನಡ ರಾಜ್ಯೋತ್ಸವದಂದು ಕನ್ನಡ ನಾಡಿನಲ್ಲಿರುವ ಐತಿಹಾಸಿಕ ಸ್ಥಳಗಳಾದ ಹಂಪೆಯಲ್ಲಿರುವ ವಿಜಯ ವಿಠಲ, ಕಡಲೆಕಾಳು ಗಣಪ, ಉಗ್ರ ನರಸಿಂಹ, ಕಲ್ಲಿನ ರಥ ಹಾಗೂ ಶ್ರವಣ ಬೆಳಗೋಳದ ಬಾಹುಬಲಿ, ಪ್ರಸಿದ್ಧ ಮೈಸೂರು ಅರಮನೆ, ಬೆಂಗಳೂರು ಅರಮನೆ, ೧೨ನೇ ಶತಮಾನದಲ್ಲಿಯ ಶರಣರಾದ ಬಸವಣ್ಣ, ಅಕ್ಕಮಹಾದೇವಿಯವರ ಭಾವಚಿತ್ರವನ್ನು ತೋರಿಸಿದ್ದೇವೆ. ೧೫ನೇ ಶತಮಾನದಲ್ಲಿಯ ದಾಸ ಸಾಹಿತ್ಯದ ಶ್ರೇಷ್ಠ ಕೀರ್ತನಕಾರರಾದ ಪುರಂದರ ದಾಸರು, ಕನಕ ದಾಸರು ಪ್ರಮುಖರು. ನಮ್ಮ ನಾಡಿನ ಶ್ರೇಷ್ಠ ಗಾಯಕರಾದ ಭೀಮಸೇನ್ ಜೋಷಿ, ಗಂಗೂಬಾಯಿ ಹಾನಗಲ್, ಪುಟ್ಟರಾಜ್ ಗವಾಯಿಗಳು ಮುಂತಾದವರ ಭಾವಚಿತ್ರ. ಕನ್ನಡದ ಪ್ರಮುಖ ನದಿಗಳಾದ ಕಾವೇರಿ, ತುಂಗಭದ್ರ, ಕೃಷ್ಣಾ ಮುಂತಾದವುಗಳ ಪರಿಚಯ. ನಮ್ಮ ನಾಡಿನ ನಕಾಶೆಯಲ್ಲಿ ಬರುವ ೩೧ ಜಿಲ್ಲೆಗಳ ಹೆಸರುಗಳು. ಕನ್ನಡ ನಾಡಿನ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ೮ ಜನ ಕವಿಗಳ ಹೆಸರು – ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ, ಚಂದ್ರಶೇಖರ್ ಕಂಬಾರ್, ಗಿರೀಶ್ ಕಾರ್ನಾಡ್, ವಿ.ಕೃ. ಗೋಕಾಕ್, ಶಿವರಾಮ ಕಾರಂತ್, ಯು.ಆರ್. ಅನಂತ್ ಮೂರ್ತಿ.
ಮೇಲಿನ ಎಲ್ಲ ವಿಷಯಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದೇವೆ.