ಸಂಚಿಕೆ –65:
ಸಂಚಿಕೆ – 65: – ಚೆನ್ನುಡಿ ಪುಸ್ತಕ ಭಾಗ- 6ರ 34 ನೆಯ ಕಥೆ “ನಂಬಿಕೆಯಿಂದ ಗೆಲುವು.” ಈ ಕಥೆಯ ನೀತಿ – ಯಾವುದೇ ಕೆಲಸವನ್ನು ಮಾಡುವಾಗ ಶ್ರದ್ಧೆ ಮತ್ತು ನಂಬಿಕೆ ಅವಶ್ಯ ನಂಬಿಕೆ ಮತ್ತು ಶ್ರದ್ಧೆಯಿಂದ ಆರಂಭಿಸಿದ ಕೆಲಸ ಯಶಸ್ವಿಯಾಗುತ್ತದೆ.
ಸಂಚಿಕೆ –54:
ಸಂಚಿಕೆ – 54: – ಚೆನ್ನುಡಿ ಭಾಗ – 3 ರ 56ನೇ ಅಂಕಣದಲ್ಲಿ ‘ಅಜ್ಞಾನವೇ ದುಃಖಕೆ ಕಾರಣ.’ ಈ ಕಥೆಯ ನೀತಿ – ಅಜ್ಞಾನದಿಂದ ಅಂಧಕಾರಕ್ಕೆ ಒಳಗಾಗಬಾರದು, ನಿಜವಾಗಿ ಮಾನವನ ಬದುಕಿನಲ್ಲಿ, ಸಂತೋಷ ಎಂಬ ಧನವೇ ಬಹು ದೊಡ್ಡದು. ಸಂತೋಷವೆಂಬ ಸಂಪತ್ತುಳ್ಳವರೇ ನಿಜವಾದ ಧನಿಕರು ಅಂತಹ ಸಂಪತ್ತನ್ನು ಸಂಪಾದಿಸುವತ್ತ ಗಮನಹರಿಸಿದಾಗ ಜನರ ಜಾನ ದೂರವಾಗುತ್ತದೆ.
ಸಂಚಿಕೆ –53:
ಸಂಚಿಕೆ – 53: – ಚೆನ್ನುಡಿ ಪುಸ್ತಕ ಭಾಗ- 4ರ 78 ನೆಯ ಕಥೆ “ಕರ್ತವ್ಯದ ಪ್ರೇರಣೆ.” ಈ ಕಥೆಯ ನೀತಿ – ತಪ್ಪು ಮಾಡಿದ ವ್ಯಕ್ತಿಯನ್ನು ತಪ್ಪಿನಿಂದಲೇ ತಿದ್ದುವುದು ಒಳ್ಳೆಯದಲ್ಲ. ಇದಕ್ಕೆ ಬದಲಾಗಿ ಮೃದುವಾದ ಮಾತು ದಯೆ ಮತ್ತು ಪ್ರಾಮಾಣಿಕ ನಡುವಳಿಕೆ ಇವುಗಳಿಂದ ಇತರರ ಹೃದಯವನ್ನು ಗೆಲ್ಲುವುದು ಮಾನವೀಯ ಧರ್ಮ.
ಸಂಚಿಕೆ –52:
ಸಂಚಿಕೆ – 52: – ಚೆನ್ನುಡಿ ಭಾಗ – 3 ರ 42ನೇ ಅಂಕಣದಲ್ಲಿ ‘ದಯ ಎಂಬ ಸರಿದಾರಿಯಲ್ಲಿ’ ಈ ಕಥೆಯ ನೀತಿ – ಪ್ರಾಣಿ ಹಿಂಸೆ ಮಹಾ ಪಾಪ, ಸೂಕ್ತವಾದ ಸಂದರ್ಭದಲ್ಲಿ, ಸಮರ್ಥರಾದ ವ್ಯಕ್ತಿಗಳು ನೀಡುವ ಉಪದೇಶ ಸಲಹೆಗಳು ವ್ಯಕ್ತಿಯ ಹೃದಯ ಪರಿವರ್ತನೆಗೆ ಕಾರಣವಾಗುತ್ತವೆ.
ಸಂಚಿಕೆ –51:
ಸಂಚಿಕೆ – 51: – ಚೆನ್ನುಡಿ ಪುಸ್ತಕ ಭಾಗ- 4ರ 76 ನೆಯ ಅಂಕಣ “ಹಸಿವೆ ಏಕೆ ಆಗುವುದಿಲ್ಲ.” ಈ ಕಥೆಯ ನೀತಿ – ನಾವು ಒಳ್ಳೆಯ ಆರೋಗ್ಯವಂತರಾಗಿ ಬದುಕಲು ದೇವರು ಕೊಟ್ಟಂತಹ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಅಂದರೆ ಮಾತ್ರ ಊಟ ಮಾಡಿದ ಆಹಾರ ಕರಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಜವಾಬ್ದಾರಿಯು ನಮ್ಮ ಕೈಯಲ್ಲಿ ಇದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಸಂಚಿಕೆ –50:
ಸಂಚಿಕೆ – 50: – ಚೆನ್ನುಡಿ ಭಾಗ – 3 ರ 31ನೇ ಅಂಕಣದಲ್ಲಿ ‘ಒಳ್ಳೆಯ ಆಡಳಿತಗಾರರು ಯಾರು?’ ಈ ಕಥೆಯ ನೀತಿ – ಒಳ್ಳೆಯ ಹೃದಯವಂತಿಕೆ ಉತ್ತಮ ಆಡಳಿತದ ಸೂತ್ರ. ಜನಸಾಮಾನ್ಯರೊಡನೆ ಮೃದುವಾಗಿ ವ್ಯವಹರಿಸುತ್ತಾ, ಅವರ ಹೃದಯವನ್ನು ಗೆಲ್ಲಲು ಸಮರ್ಥರಾದವರೇ ಒಳ್ಳೆಯ ನಾಯಕರಾಗಬಲ್ಲರು.
ಸಂಚಿಕೆ –49:
ಸಂಚಿಕೆ – 49: – ಚೆನ್ನುಡಿ ಪುಸ್ತಕ ಭಾಗ- 4ರ 63ನೇಯ ಕಥೆ “ವ್ಯತ್ಯಾಸವೆಲ್ಲಿದೆ ?” ಈ ಕಥೆಯ ನೀತಿ – ನಾವು ಯಾವುದೇ ಕಾರ್ಯಗಳನ್ನು ಮಾಡುವಾಗ ಫಲಾಫಲಗಳ ಬಗ್ಗೆ ಚಿಂತನೆ ನಡೆಸಬಾರದು. ಉತ್ತಮವಾದ ಆಚಾರ-ವಿಚಾರ ನಡೆ- ನುಡಿಗಳ ಬಗ್ಗೆ ಚಿಂತನೆ ಮಾಡಿ ಉತ್ತಮ ಆದರ್ಶಗಳಿಂದ ನಡೆದಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ.
ಸಂಚಿಕೆ –48:
ಸಂಚಿಕೆ – 48: – ಚೆನ್ನುಡಿ ಭಾಗ – 3 ರ 22ನೇ ಅಂಕಣದಲ್ಲಿ ‘ಮತ್ಮರ ಪಡುವುದರಿಂದ ಫಲವಿಲ’. ಈ ಕಥೆಯ ನೀತಿ – ಆಸೆಯೇ ದುಃಖಕ್ಕೆ ಮೂಲ ಜನರು ತಮ್ಮಲ್ಲಿ ಇಲ್ಲದ ಸಂಪತ್ತಿನ ಬಗ್ಗೆ ಹಂಬಲಿಸುವ ಬದಲು ತಮ್ಮಲ್ಲಿ ಇದ್ದ ಸಂಪತ್ತು ಹಣಕಾಸನ್ನು ಸೂಕ್ತವಾಗಿ ಬಳಸುತ್ತಾ ಸುಖ ಸಂತೋಷದಿಂದ ಬಾಳು ಸಾಗಿಸಲು ಕಲಿಯಬೇಕು.
ಸಂಚಿಕೆ – 64
ಸಂಚಿಕೆ – 64: ಚೆನ್ನುಡಿ ಭಾಗ – 5 ರ 90ನೇ ಅಂಕಣದಲ್ಲಿ ‘ಸಿಟ್ಟನ್ನು ಗೆಲ್ಲುವುದು ಹೇಗೆ?’ ಈ ಕಥೆಯ ನೀತಿ – ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು. ಯಾರಿಗೆ ಕ್ರೋಧವು ಹಾಳು, ಅದಕ್ಕೆ ವಶೀಭೂತರಾಗುವುದು ತಪ್ಪು . ಎಂಬ ಪರಿಜ್ಞಾನವಿದೆಯೋ ಅವರು ಕ್ರೋಧಕ್ಕೆ ಕಾರಣವನ್ನು ಗುರುತಿಸಿ, ಅದರ ಬದಲು ಇನ್ನೊಂದು ಪ್ರಯೋಜನಕಾರಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ಕ್ರೋಧದ ಕಾರಣವನ್ನು ಸಂಪೂರ್ಣವಾಗಿ ಮರೆತು ಬಿಡಲು ಸಾಧ್ಯ.
ಸಂಚಿಕೆ – 63
ಸಂಚಿಕೆ – 63: ಚೆನ್ನುಡಿ ಪುಸತಕ ಭಾಗ- 6ರ ಆರನೆಯ ಕಥೆ ಸಮಸ್ಯೆಗಳನ್ನು ಎದನರಿಸಲನ ಕಲಿಯಿರಿ. ಈ ಕಥೆಯ ನೀತಿ – ಜೀವನ್ದಲಿಿ ಬರನವ ಕಷ್ಟ ಮತ್ನತ ತ ಂದರೆಗಳನ್ನು ಧೈಯಯದಂದ ಎದನರಿಸಿದಾಗ ಜೀವನ್ದಲಿಿ ಯಶಸಸನ್ನು ಕಾಣಲನ ಸಾಧ್ೆ.