ಸಂಚಿಕೆ – 5:
ಚೆನ್ನುಡಿ ಭಾಗ -1 ರ ನಾಲ್ಕನೆಯ ಕಥೆ ‘ಮೃದು ವಚನವೇ ಸಫಲತೆಯ ಗುಟ್ಟು’. ಈ ಕಥೆಯ ನೀತಿ – ನಾಲಗೆಯಂತೆ ಮೃದುವಾದ ಸ್ವಭಾವವನ್ನು ಹೊಂದಿದವರು ಎಲ್ಲ ಕಡೆಗೂ ಜಯಶಾಲಿಗಳಾಗುತ್ತಾರೆ.
ಸಂಚಿಕೆ – 4:
ಸಂಚಿಕೆ – 4: ಚೆನ್ನುಡಿ ಭಾಗ -1 ರ ಅರವತ್ತೈದನೆಯ ಕಥೆ ಮಕ್ಕಳಿಂದಲೂ ಕಲಿಯಬಹುದಾದ ಪಾಠ. ಗೌತಮ ಬುದ್ಧನ ಬಾಲದ ಒಂದು ಪ್ರಸಂಗ, ಈ ಕಥೆಯ ನೀತಿ – ಪ್ರಾಣಿ ಪಕ್ಷಿಗಳ ಹಿಂಸೆಯನ್ನು ಮಾಡಬಾರದು. ಈ ಕಥೆಯ ಪ್ರಮುಖ ಅಂಶ ಎಂದರೆ ನಮಗೆ ಕಲಿಯಲು ಮನಸ್ಸಿರಬೇಕು ಆಗ ಮಕ್ಕಳಿಂದಲೂ ಕಲಿಯಲು ಸಾಧ್ಯ.
ಸಂಚಿಕೆ – 3:
ಚೆನ್ನುಡಿ ಭಾಗ -1 ರ ತೆನಾಲಿ ರಾಮಕೃಷ್ಣನ ಹದಿನೈದನೆಯ ಉದಾಹರಣೆಯ ಕಥೆ ಬುದ್ಧಿವಂತಿಕೆಯೇ ಮೇಲು. ಈ ಕಥೆಯ ನೀತಿ – ಬುದ್ಧಿವಂತಿಕೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಾಗಿದೆ.
ಸಂಚಿಕೆ – 2:
ಚೆನ್ನುಡಿ ಭಾಗ -1 ರ ಗೋಪಾಲಕೃಷ್ಣ ಗೋಖಲೆಯವರ ಎಂಟನೆಯ ಉದಾಹರಣೆಯ ಕಥೆ ಪ್ರಾಮಾಣಿಕತೆಯೇ ಮೂಲ ಮಂತ್ರ. ಈ ಕಥೆಯ ನೀತಿ – ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕು ಎಂಬುದಾಗಿದೆ. ಸತ್ಯ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಸಾಧನೆ, ಯಶಸ್ಸು ಸಾಧ್ಯ.
ಸಂಚಿಕೆ – 1:
ಚೆನ್ನುಡಿ ಭಾಗ -1 ರ ಅಬ್ರಾಹಂ ಲಿಂಕನ್ ಅವರ ಒಂದನೆಯ ಉದಾಹರಣೆಯ ಕಥೆ ಪ್ರಾರ್ಥನೆಯಿಂದ ಗೆಲುವು ಈ ಕಥೆಯ ನೀತಿ – ಯಾವುದೇ ರೀತಿಯ ಸಂದಿಗ್ಧತೆ, ಸಮಸ್ಯೆ, ಕಷ್ಟಗಳು ಜೀವನದಲ್ಲಿ ಎದುರಾದಾಗ ದೇವರ ಮೇಲಿನ ನಂಬಿಕೆ ಮತ್ತು ಶ್ರದ್ಧೆಯಿಂದಾಗಿ ಮನಸ್ಥೈರ್ಯ ದೊರಕುವುದು.